ಚೆನ್ನೈ : ತನ್ನ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದಕ್ಕೆ ಅಳಿಯ ಮತ್ತು ಮಗಳನ್ನು ಟುಟಿಕೋರಿನ್ ಜಿಲ್ಲೆಯ ತಂದೆಯೊಬ್ಬ ಕುಡುಗೋಲಿನಲ್ಲಿ ಕೊಚ್ಚಿ ಕೊಂದಿದ್ದಾನೆ.ಟುಟಿಕೋರಿನ್ ಜಿಲ್ಲೆಯ ಕೋವಿಲ್ಪಟ್ಟಿ ನಗರದ ಸಮೀಪದ ವೀರಪಟ್ಟಿ ಗ್ರಾಮದ ನಿವಾಸಿ ಮುತ್ತುಕುಟ್ಟಿ(50) ಆರೋಪಿಯಾಗಿದ್ದಾನೆ. ಆತನ ಪುತ್ರಿ ರೇಷ್ಮಾ(20) ಕೋವಿಲ್ಪಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅದೇ ಪ್ರದೇಶದ ದಿನಗೂಲಿ ಕಾರ್ಮಿಕ ಮಾಣಿಕರಾಜ್(26)ನನ್ನು ರೇಷ್ಮಾ ಪ್ರೀತಿಸುತ್ತಿದ್ದಳು. ಮುತ್ತುಕುಟ್ಟಿಗೆ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾರೆ. ಆದರೆ ಮುತ್ತುಕುಟ್ಟಿ ಒಪ್ಪಿಕೊಂಡಿಲ್ಲ. ಪರಿಣಾಮ ಇಬ್ಬರು ಓಡಿ ಹೋಗಿ