ಚೆನ್ನೈ : ಭಾರತದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಗುರುವಾರ ಚೆನ್ನೈನಲ್ಲಿ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಯಶಸ್ವೀ ಪರೀಕ್ಷೆ ನಡೆಸಿದರು.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್ನಲ್ಲಿ ಮೊದಲ ಬಾರಿಗೆ 5ಜಿ ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಅಶ್ವಿನಿ ವೈಷ್ಣವ್, ಇಡೀ ನೆಟ್ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ ಎಂದರು.ಈ ಸಂಪೂರ್ಣ ತಂತ್ರಜ್ಞಾನದ ಯಶಸ್ಸಿನೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು ಎಂದು ವೈಷ್ಣವ್ ಹೇಳಿದರು. ದೂರಸಂಪರ್ಕ ಇಲಾಖೆ