ಯುಎಇ ಸರ್ಕಾರ ಕೇರಳಕ್ಕೆ ನೀಡಿದ ನೆರವನ್ನು ತಿರಸ್ಕರಿಸಿದ ಭಾರತ ಸರ್ಕಾರ

ನವದೆಹಲಿ, ಗುರುವಾರ, 23 ಆಗಸ್ಟ್ 2018 (11:35 IST)

ನವದೆಹಲಿ : ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಕೇರಳಕ್ಕೆ ಸಹಾಯ ಮಾಡಲು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಸರ್ಕಾರ ಮುಂದಾಗಿದ್ದರೂ ಕೂಡ ಭಾರತ ಸರ್ಕಾರ  ಅವರ  ಸಹಾಯವನ್ನು ತಿರಸ್ಕರಿಸಿದೆ.


ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ನೀಡಲು  ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಸರ್ಕಾರ ನಿರ್ಧರಿಸಿತ್ತು. ಪ್ರವಾಹದಿಂದ ಆಗಿರುವ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಮನವಿಯನ್ನು ಪುರಸ್ಕರಿಸಿ, ಆ ಹಣವನ್ನು ಸ್ವೀಕರಿಸುವಂತೆ ಸರ್ಕಾರ ಕೇಂದ್ರ ಸರ್ಕಾರವನ್ನು ಮನವಿ ಮಾಡಿದರೂ ಕೂಡ ಅದಕ್ಕೆ  ಒಪ್ಪಿಕೊಳ್ಳದ ಕೇಂದ್ರ ಸರ್ಕಾರ ಯುಎಇ ಮನವಿಯನ್ನು ವಿನಮ್ರವಾಗಿಯೇ ತಿರಸ್ಕರಿಸಿದೆ.


ವಿದೇಶಗಳಿಂದ ಹಣದ ಸಹಾಯ ಪಡೆದು ಮುಲಾಜಿಗೆ ಬೀಳುವ ಸನ್ನಿವೇಶವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಸದ್ಯಕ್ಕೆ ದೇಶದ ಆಂತರಿಕ ಪ್ರಯತ್ನಗಳಿಂದಲೇ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೀಗರ ಔತಣಕ್ಕೆಂದು ಮೀಸಲಿಟ್ಟಿದ್ದ ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡಿದ ರಾಜ್ಯದ ಸಚಿವರು ಯಾರು ಗೊತ್ತಾ?

ಬೆಂಗಳೂರು: ತಮ್ಮ ಪುತ್ರನ ಮದುವೆ ಮಾಡಿ ಅದ್ಧೂರಿಯಾಗಿ ಬೀಗರ ಔತಣಕೂಟ ಏರ್ಪಡಿಸಲು ತಯಾರಿ ಮಾಡಿದ್ದ ಸಚಿವ ...

news

ತನ್ನ ಚಪಲ ತೀರಿಸಿಕೊಳ್ಳಲು ವಿದ್ಯಾರ್ಥಿನಿಯನ್ನು ಬಳಸಿಕೊಂಡ ಶಿಕ್ಷಕನಿಗೆ ಆದ ಗತಿ ಏನು ಗೊತ್ತಾ?

ಆಂಧ್ರಪ್ರದೇಶ : ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಏಲೂರ್​ ಗ್ರಾಮದ ಗ್ರಾಮಸ್ಥರು ವಿದ್ಯಾರ್ಥಿನಿವೋರ್ವಳಿಗೆ ...

news

ಈದ್‌ ಪ್ರಾರ್ಥನೆಗೆ ತೆರಳಿದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೇಲೆ ಯುವಕರು ಚಪ್ಪಲಿ ತೂರಿದ್ದು ಯಾಕೆ?

ಶ್ರೀನಗರ : ಬುಧವಾರ ಈದ್‌ ಪ್ರಾರ್ಥನೆಗೆ ತೆರಳಿದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ...

news

ಕೇರಳ ಪ್ರವಾಹ: ಹಿಂದೂ ಕುಟುಂಬಕ್ಕೆ ನೆರವಾದ ಮಸೀದಿ!

ತಿರುವನಂತರಪುರಂ: ಪ್ರವಾಹ, ಪ್ರಾಕೃತಿಕ ವಿಕೋಪಗಳು ಬಂದರೆ ಮನುಷ್ಯ ಜಾತಿ-ಧರ್ಮ ಮರೆತು ನೆರವಾಗಬೇಕು ...