ಮುಂಬೈ : ಹಿರಿಯ ನಾಗರಿಕರ ಪಾಲನೆ ಪೋಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪುವೊಂದನ್ನು ನೀಡಿದೆ. ಈ ಕುರಿತು ವಿಶೇಷ ಕಾನೂನನ್ನು ಉಲ್ಲೇಖಿಸಿರುವ ಕೋರ್ಟ್ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ದೌರ್ಜನ್ಯ ಎಸಗಿದರೆ ಮಗನಿಗೆ ನೀಡಿದ ಆಸ್ತಿಯನ್ನು ತಂದೆ ತಾಯಿ ವಾಪಸ್ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಈ ಹಿಂದೆ ಅಂಧೇರಿಯ ವ್ಯಕ್ತಿಯೊಬ್ಬರ ಪತ್ನಿ ಮೃತಪಟ್ಟಿದ್ದ ಸಂದರ್ಭದಲ್ಲಿ ಮಗ ಮತ್ತು ಸೊಸೆ ಫ್ಲ್ಯಾಟ್ ನ ಅರ್ಧ ಭಾಗವನ್ನು ಪಡೆದುಕೊಂಡಿದ್ದರು. ನಂತರ