ರಾಂಚಿ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ 12ನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಚ್ಚರಿಯ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ. ಮೃತಳನ್ನು ಸಾವಿತ್ರಿ ದೇವಿ (40) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ರಾಮಚಂದ್ರ ತುರಿ ಕೊಲೆ ಮಾಡಿದ್ದಾನೆ. ಪತಿ ಹಾಗೂ ಪತ್ನಿ ಇಬ್ಬರೂ ಕೋಣೆಯೊಳಗೆ ಕುಳಿತುಕೊಂಡು ಮದ್ಯಪಾನ ಮಾಡಿದ್ದಾರೆ. ಹೀಗೆ ಮಾತನಾಡುತ್ತಾ ಇಬ್ಬರ ಮಧ್ಯೆ ವಿಚಾರವೊಂದಕ್ಕೆ ವಾಗ್ವಾದ ನಡೆದಿದೆ. ಪತ್ನಿಯ ಮಾತಿನಿಂದ ರೊಚ್ಚಿಗೆದ್ದ ಪತಿ, ಅಲ್ಲೇ ಇದ್ದ ಕೋಲು