ಲಕ್ನೋ : ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಾಗಿ ಆಯೋಗವನ್ನು ರಚಿಸಲು ಆದೇಶಿಸಿದ್ದ ವಾರಣಾಸಿಯ ನ್ಯಾಯಾಧೀಶರಿಗೆ ಜೀವ ಬೆದರಿಕೆ ಪತ್ರಗಳು ಬಂದಿದೆ.ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ಹಾಗೂ ಇತರ ದೇವತೆಗಳ ಆರಾಧನೆಗೆ ಮಹಿಳೆಯರು ಹಕ್ಕು ಚಲಾಯಿಸಿದ ಪ್ರಕರಣದಲ್ಲಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಸಮೀಕ್ಷೆಯ ಆಯೋಗಕ್ಕೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರಿಗೆ ಇಸ್ಲಾಮಿಕ್ ಅಘಾಜ್ ಎಂಬ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿದೆ.ಮೇ 20ರಂದು ಸುಪ್ರೀಂ