ಕೆಲಸ ಕೊಡಿಸುವ ನೆಪದಲ್ಲಿ ಹಣಪಡೆದು ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಂಸ್ಥೆಯ ವ್ಯವಸ್ಥಾಪಕ ಅರೆಸ್ಟ್

ಚೆನ್ನೈ, ಗುರುವಾರ, 8 ನವೆಂಬರ್ 2018 (06:52 IST)

ಚೆನ್ನೈ : ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಹಣ ತೆಗೆದುಕೊಂಡು,  ಅದನ್ನು ವಾಪಾಸು ಕೇಳಿದ್ದಕ್ಕೆ  ಯುವತಿಗೆ ನೀಡುತ್ತಿದ್ದ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.


ಆರೋಪಿಯ ಹೆಸರು ಸುಂದರಂ ಎಂಬುದಾಗಿ ತಿಳಿದುಬಂದಿದ್ದು, ಈತ ಕಾಲೇಜ್ ಒಂದಕ್ಕೆ  ಭೇಟಿ‌ ನೀಡಿದ್ದ ವೇಳೆ ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ, 10-20 ಸಾವಿರ ಹಣ ಪಡೆದಿದ್ದ. ಸಂತ್ರಸ್ಥೆ ಕೂಡ ಹಣ ನೀಡಿದ್ದು, ಆತ ಕೆಲಸ ಕೊಡಿಸದ ಹಿನ್ನಲೆಯಲ್ಲಿ ಹಣ ವಾಪಾಸು ಕೇಳಿದ್ದಾಳೆ. 


ಆರೋಪಿಗೆ ಹಣ ನೀಡಲು ಇಷ್ಟವಿರದ ಕಾರಣ ತನ್ನ ಕಚೇರಿಗೆ ಬಂದ ಆಕೆಗೆ ಪಾನೀಯದಲ್ಲಿ ಡ್ರಗ್ಸ್ ಬೆರಸಿ ಕುಡಿಸಿ ನಂತರ ಆಕೆಯ ನಗ್ನ ಚಿತ್ರವನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿ ಹಣ ನೀಡುವುದಿಲ್ಲ ಎಂದಿದ್ದಾನೆ.


ಈ ಹಿನ್ನಲೆಯಲ್ಲಿ ಯುವತಿ ಲೈಂಗಿಕ ದೌರ್ಜನ್ಯದ ಆರೋಪದಡಿ ಸುಂದರಂ ವಿರುದ್ಧ ಚೆನ್ನೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತಾನು ನೀಡಿದ್ದ ಹಣವನ್ನು ವಾಪಾಸು ಕೊಡಿಸುವಂತೆ ಮನವಿ ಮಾಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಂದರಂನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ , 37 ಬಾರಿ ಚಾಕುವಿನಿಂದ ಇರಿದು ಕೊಂದ ಕಾಮುಕರು

ಗಾಂಧಿನಗರ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು 37 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ...

news

ಸ್ನೇಹಿತೆಯ ಪಾರ್ಟಿಗೆ ಬಂದ ಯುವತಿಗೆ ಮೂವರು ಯುವಕರು ಸೇರಿ ಮಾಡಿದ್ದೇನು?

ನವದೆಹಲಿ : 21 ವರ್ಷದ ಯುವತಿಯೊಬ್ಬಳಿಗೆ ಮತ್ತು ಬರುವ ಮಾತ್ರೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ...

news

ಆರ್ ಬಿ ಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ?

ಭಾರತೀಯ ರಿಸರ್ವ ಬ್ಯಾಂಕ್ ( ಆರ್ ಬಿ ಐ ) ನ ಮುಂದಿನ ಆಡಳಿತ ಮಂಡಳಿ ಸಭೆ ನಡೆಯಲಿರುವ ನವೆಂಬರ್ 19ರಂದು ಆರ್ ...

news

ಉಪಚುನಾವಣೆ ಫಲಿತಾಂಶ: ಕಮಲ ಪಾಳೆಯಕ್ಕೆ ಖಡಕ್ ಎಚ್ಚರಿಕೆ

ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ...