ನವದೆಹಲಿ : ಜೂನ್ 30, 2020ರೊಳಗೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಕಡ್ಡಾಯವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಒಂದೇ ರೇಷನ್ ಕಾರ್ಡ್ ಮೂಲಕ ದೇಶದ ಬೇರೆ ಪ್ರದೇಶಗಳಲ್ಲಿ ಅದರ ಲಾಭ ಪಡೆಯಬಹುದು. ಹೊಸ ವರ್ಷದಿಂದ ದೇಶದ 12 ರಾಜ್ಯಗಳಲ್ಲಿ ಈ ಯೋಜನೆ ಪ್ರಾರಂಭವಾಗಿದೆ. ಜೂನ್ 1ರೊಳಗೆ ದೇಶದ್ಯಾಂತ ಇದನ್ನು ವಿಸ್ತರಿಸುತ್ತೇವೆ ಎಂದು ಹೇಳಿದ್ದಾರೆ.