ರಾಯಪುರ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಹಿರಿಯ ವೈದ್ಯರ ಮೇಲೆ ಗಂಭೀರವಾದ ಆರೋಪ ಮಾಡಿದ್ದಾಳೆ. ಅಂಬೇಡ್ಕರ್ ಆಸ್ಪತ್ರೆಯ ಪ್ರೊಫೆಸರ್ ಒಬ್ಬರು ತನ್ನೊಂದಿಗೆ ಸಹಕರಿಸಿದರೆ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ನೀಡುವುದಾಗಿ ಹೇಳಿದ್ದಾರೆ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ. ಅಲ್ಲದೇ ತಾನು ಅದನ್ನು ವಿರೋಧಿಸಿದ್ದಕ್ಕೆ ತನ್ನನ್ನು ಪರೀಕ್ಷೆಯಲ್ಲಿ ಅನುತ್ತಿರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾಳೆ.ಈ ಬಗ್ಗೆ ವಿದ್ಯಾರ್ಥಿನಿ ವೈದ್ಯರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಹಾಗೇ ವೈದ್ಯರು ಕಳುಹಿಸಿದ ಅಶ್ಲೀಲ, ಲೈಂಗಿಕ ಸಂದೇಶಗಳನ್ನು ಸ್ಕ್ರೀನ್