ಲಕ್ನೋ : ಅತ್ಯಾಚಾರದ ಆರೋಪ ಮಾಡಿ ಹಣದ ಬೇಡಿಕೆ ಇಟ್ಟ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಲಖ್ನಾವಳಿ ಗ್ರಾಮದ ಮಹಿಳೆ ಯುವಕನೊಬ್ಬನಿಗೆ ಅತ್ಯಾಚಾರ ಆರೋಪದಡಿ ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿ ಆತನಿಂದ ಹಣ ವಸೂಲಿ ಮಾಡುತ್ತಿದ್ದಳು. ನಂತರ ಆಕೆ ಮತ್ತೆ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಾಗ ಆ ವ್ಯಕ್ತಿ ಭಾನುವಾರ ಸುರಜ್ಪುರ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.