Widgets Magazine

ಕ್ಯಾಬ್‍ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಲಿಫ್ಟ್ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿದ ಕಾಮುಕರು

ಚಂಡೀಗಢ| pavithra| Last Modified ಮಂಗಳವಾರ, 26 ಫೆಬ್ರವರಿ 2019 (06:47 IST)
: ಕ್ಯಾಬ್‍ಗಾಗಿ ಕಾಯುತ್ತಿದ್ದ 27 ವರ್ಷದ ಮಹಿಳೆಗೆ ಕಾಮುಕರು ಲಿಫ್ಟ್ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಎಸಗಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.


ಶನಿವಾರ ಮಹಿಳೆಯೋಬ್ಬಳು ಮನೆಗೆ ತೆರಳಲು ಸುಮಾರು ರಾತ್ರಿ 1 ಗಂಟೆಯ ಸಮಯದಲ್ಲಿ ಇಫ್ಕೊ ಚೌಕ್ ಬಳಿ ಕ್ಯಾಬ್ ಗಾಗಿ ಕಾಯುತ್ತಿದ್ದಳು. ಆ ವೇಳೆ ಬಿಳಿ ಮಾರುತಿ ಸ್ವಿಫ್ಟ್ ನಲ್ಲಿ ಬಂದ ಮೂವರು ಕಾಮುಕರು ದೆಹಲಿಯ ಆಜಾದ್ಪುರದ ನಿವಾಸದಲ್ಲಿ ಬಿಡುವುದಾಗಿ ಹೇಳಿ ಸಂತ್ರಸ್ತೆಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ನಂತರ ಆಕೆಯನ್ನು
ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇಬ್ಬರು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.


ಈ ಘಟನೆಯ ಬಳಿಕ ಸಂತ್ರಸ್ತೆ ಪೊಲೀಸ್ ಠಾಣೆಗೆ ಬಂದು ಅಪರಿಚಿತ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :