ಈ ಕಾರಣಕ್ಕೆ ತರಕಾರಿ ಮಾರುತ್ತಿದ್ದ ಹುಡುಗನ ಜೀವ ಬಲಿಯಾಯ್ತು!

ನೊಯ್ಡಾ| pavithra| Last Modified ಬುಧವಾರ, 23 ಡಿಸೆಂಬರ್ 2020 (07:40 IST)
ನೊಯ್ಡಾ : ತರಕಾರಿ ಮಾರುತ್ತಿದ್ದ 15 ವರ್ಷದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಥಳಿಸಿ ಕೊಂದ ಘಟನೆ ನೊಯ್ಡಾದ ನಯ ಗಾಂವ್ ಪ್ರದೇಶದಲ್ಲಿ ನಡೆದಿದೆ.

ತರಕಾರಿ ಖರೀದಿಸಲು ಬಂದ ಆರೋಪಿಗಳು ಸಂತ್ರಸ್ತನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ತರಕಾರಿಗಳು ನೆಲದ ಮೇಲೆ ಬಿದ್ದಿವೆ. ಇದರಿಂದ ಆರೋಪಿ ಮತ್ತು ತರಕಾರಿ ಮಾರಾಟಗಾರರ ನಡುವೆ ಜಗಳ ನಡೆದಿದೆ. ಆ ವೇಳೆ ಆರೋಪಿ ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ಆಗ ಸಂತ್ರಸ್ತ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾನೆ. ಆಗ ಅಲ್ಲಿಂದ ಹೊರಟುಹೋದ ಆರೋಪಿಗಳು ಬಳಿಕ ಕೋಲುಗಳನ್ನು ತೆಗೆದುಕೊಂಡು ಬಂದು ಸಂತ್ರಸ್ತನ ತಲೆಗೆ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :