ಹೈದರಾಬಾದ್ : ಚಾಕ್ಲೇಟ್ ನೀಡುವುದಾಗಿ ಆಮಿಷಯೊಡ್ಡಿ ಯುಕೆಜಿ ಓದುತ್ತಿರುವ ಐದು ವರ್ಷದ ವಿದ್ಯಾರ್ಥಿನಿಯೊಬ್ಬಳನ್ನ ಶಾಲೆಯ ಸಿಬ್ಬಂದಿಯೊಬ್ಬ ಶಾಲಾ ಆವರಣದಲ್ಲಿಯೇ ಅತ್ಯಾಚಾರ ಎಸಗಿದ ಅಮಾವನೀಯ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಶನಿವಾರ ಶಾಲೆಗೆ ಬಂದಿದ್ದ ಯುಕೆಜಿ ಓದುತ್ತಿರುವ ಐದು ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಶಾಲೆಯ ಸಿಬ್ಬಂದಿಯೊಬ್ಬ ಚಾಕ್ಲೇಟ್ ನೀಡುತ್ತೇನೆ ಎಂದು ಹೇಳಿ ಕರೆದುಹೋಗಿ ಶಾಲಾ ಆವರಣದಲ್ಲಿಯೇ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಸಂತ್ರಸ್ತೆಯ ಪೋಷಕರು ಶಾಲೆಗೆ ನುಗ್ಗಿ, ಪೀಠೋಪಕರಣ, ಕಟ್ಟದ ಸೇರಿದಂತೆ ವಿವಿಧ