ಬರೇಲಿ|
pavithra|
Last Modified ಬುಧವಾರ, 4 ನವೆಂಬರ್ 2020 (09:37 IST)
ಬರೇಲಿ : ಆಸ್ತಿ ಆಸೆಗೆ ಮಗ ಸೊಸೆ ಸೇರಿ 58 ವರ್ಷದ ವೃದ್ಧೆಯನ್ನು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳು ಮನೆಯನ್ನು
ಮಾರಾಟ ಮಾಡಲು ಬಯಸಿದಾಗ ಮೃತ ಮಹಿಳೆ ತನ್ನ ಎಲ್ಲಾ ಮಕ್ಕಳಿಗೆ ಆಸ್ತಿ ಹಂಚಲು ಬಯಸಿದ್ದ ಕಾರಣ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಮಗ ಸೊಸೆ ತನ್ನ ಸಂಬಂಧಿಕರೊಬ್ಬರ ಜೊತೆ ಸೇರಿ ವೃದ್ಧೆಗೆ ಬೆಂಕಿ ಹಚ್ಚಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಪೊಲೀಸರಿಗೆ ಬಳಿ ಹೇಳಿಕೆ ನೀಡಿ ಮೃತಪಟ್ಟಿದ್ದಾರೆ. ಆ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.