ಗಾಂಧೀನಗರ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದ ಬದೌನ್ನ ಯುವಕನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.ಬದೌನ್ನ ಆದರ್ಶನಗರದ ನಿವಾಸಿ ಅಮನ್ ಸಕ್ಸೇನಾ (25) ಬಂಧಿತ ಆರೋಪಿ. ಈತ ಸೋಮವಾರ ಜಾಮ್ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರಿಗೆ ಜೀವ ಬೆದರಿಕೆಯ ಇಮೇಲ್ ಕಳುಹಿಸಿದ್ದ.ಸಕ್ಸೇನಾ ಮುಂಬೈನ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದಿದ್ದು, ಪ್ರೀತಿಸಿದ್ದ ಹುಡುಗಿಗೆ ಹತ್ತಿರವಾಗಿದ್ದ ವ್ಯಕ್ತಿಯಿಂದ ಸೇಡು ತೀರಿಸಿಕೊಳ್ಳಲು