ನವದೆಹಲಿ : ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದ್ಯ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. 2009-14ರ ಅವಧಿಯಲ್ಲಿ ರೈಲ್ವೆಯ ವಾರ್ಷಿಕ ಹೂಡಿಕೆ 45,980 ಕೋಟಿ ರೂ.ಗಳಷ್ಟಿತ್ತು. ಬಿಜೆಪಿ ಸರ್ಕಾರ ಅದನ್ನು 2014ರಲ್ಲಿ 99,511 ಕೋಟಿಗಳಿಗೆ ದ್ವಿಗುಣಗೊಳಿಸಿದೆ. ಅಲ್ಲದೆ, ಬಜೆಟ್ ಗಾತ್ರವೂ 2,45,800 ಕೋಟಿಗೆ ಹೆಚ್ಚಿದೆ.ಇದೇ ವೇಳೆ ಬುಲೆಟ್