ವಿಶ್ವವೇ ಭಾರತದತ್ತ ಗೌರವಪೂರ್ಣವಾಗಿ ನೋಡುತ್ತಿದೆ. ಇದು ನನ್ನಿಂದಾಗಿ ಸಾಧ್ಯವಾಗಿಲ್ಲ. ದೇಶದ 125 ಕೋಟಿ ಜನತೆ ಕೇಂದ್ರದಲ್ಲಿ ಸಶಕ್ತ ಮತ್ತು ಸ್ಥಿರ ಸರಕಾರವನ್ನು ಆಯ್ಕೆ ಮಾಡಿದ್ದರಿಂದ ಇಂದು ನಮ್ಮನ್ನು ವಿಶ್ವವೇ ಗೌರವಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿಯಿಂದ ದೇಶದ ಪ್ರತಿಷ್ಠೆ ಹೆಚ್ಚಾಗುತ್ತಿಲ್ಲ. 125 ಕೋಟಿ ಜನತೆ ಸ್ಥಿರ ಸರಕಾರ ಆಯ್ಕೆ ಮಾಡಿದ್ದರಿಂದ ಭಾರತದ ಪ್ರತಿಷ್ಠೆ ಹೆಚ್ಚಾಗುತ್ತಿದೆ. ಇದು ಜನತೆಯ ಮ್ಯಾಜಿಕ್ ಹೊರತು ಮೋದಿಯ ಮ್ಯಾಜಿಕ್ ಅಲ್ಲ.