ನವದೆಹಲಿ: ಮಕ್ಕಳ ಕಳ್ಳಸಾಗಣಿಕೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇಂತಹದ್ದೇ ಒಂದು ದುಷ್ಕೃತ್ಯ ನಡೆಸಲು ಹೋಗಿ ಮೂವರು ಮಹಿಳೆಯರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದೆಹಲಿಯ ಜಮಾ ಮಸೀದಿ ಹೊರಭಾಗದಿಂದ ಮಗುವನ್ನು ಕದ್ದ ಮಹಿಳೆಯರಲ್ಲಿ ಒಬ್ಬಾಕೆ ವ್ಯಾಟ್ಸಪ್ ನಲ್ಲಿ 1.8 ಲಕ್ಷ ರೂ. ಗೆ ಮಾರಾಟಕ್ಕಿಟ್ಟಿದ್ದಳು. ಮಗುವಿನ ಆಕಾಂಕ್ಷಿಗಳು ಯಾರೋ ಈ ಸಂದೇಶ ನೋಡಿ ಪೊಲೀಸರಿಗೆ ಸುಳಿವು ನೀಡಿದ್ದರು.ಅದರಂತೆ ವಿಚಾರಣೆ ನಡೆಸಿದಾಗ ಮಗುವಿನ ಕಳ್ಳ ಮಾರಾಟ ಜಾಲ