ಮುಂಬೈ: ಕದ್ದ ಮಾಲಿನೊಂದಿಗೆ ಕಳ್ಳ ತಪ್ಪಿಸಿಕೊಳ್ಳುತ್ತಿರುವಾಗ ಪೊಲೀಸರು ರೈಲು ನಿಲ್ಲಿಸಿ ಸಾಹಸಮಯವಾಗಿ ಕಳ್ಳನನ್ನು ಹಿಡಿಯುವ ಸನ್ನಿವೇಶವನ್ನು ಸಿನಿಮಾದಲ್ಲಿ ನೋಡಿರುತ್ತೀರಿ. ಅಂತಹದ್ದೇ ಘಟನೆ ಮುಂಬೈನಲ್ಲಿ ನಡೆದಿದೆ.46 ಲಕ್ಷ ಮೌಲ್ಯದ ನಗ-ನಗದು ಕದ್ದು ರೈಲಿನಲ್ಲಿ ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿಯಲು ಪೊಲೀಸರು ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ. ಬಿಹಾರ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ 25 ವರ್ಷದ ಆರೋಪಿ ಪರಾರಿಯಾಗುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ರೈಲು ಬೆನ್ನಟ್ಟಿ ಕಳ್ಳನನ್ನು ಸೆರೆಹಿಡಿದಿದ್ದಾರೆ.ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳ