ಬೆಂಗಳೂರು: ವಿಶಾಖಪಟ್ಟಣದಲ್ಲಿ ನಿನ್ನೆ ನಡೆದ ಅನಿಲ ಸೋರಿಕೆ ಪ್ರಕರಣ ದೇಶದಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ಮನುಷ್ಯರು ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳೂ ಪ್ರಾಣ ವಾಯುವಿಗಾಗಿ ಸಂಕಟ ಪಡುತ್ತಿರುವ ದೃಶ್ಯಗಳು ಆಘಾತವುಂಟು ಮಾಡಿದೆ. Vizagವಿಷಾನಿಲ ಸೋರಿಕೆಯಾದಾಗ ನಾವು ಮಾಡಬಹುದಾದ ಮುನ್ನೆಚ್ಚರಿಕಾ ಕ್ರಮಗಳು ಏನು ಗೊತ್ತಾ? ಇಂತಹ ಸಂದರ್ಭದಲ್ಲಿ ಚೆನ್ನಾಗಿ ನೀರು ಕುಡಿಯಬೇಕು.ಒಂದು ವೇಳೆ ಮನೆಯಲ್ಲೇ ಇದ್ದರೂ ಒದ್ದೆ ಬಟ್ಟೆ ಅಥವಾ ಮಾಸ್ಕ್ ಧರಿಸಿದರೆ ಉತ್ತಮ. ಕಣ್ಣುಗಳು ಉರಿಯುತ್ತಿದ್ದರೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುತ್ತಿರಬೇಕು.