ಹೊಸದಿಲ್ಲಿ : ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಮರು ಉತ್ಪಾದನಾ ಸಂಖ್ಯೆಯು ಈ ವಾರ 4ರಷ್ಟು ದಾಖಲಾಗಿದೆ.ಇದು ಅತ್ಯಧಿಕ ಸೋಂಕು ಪ್ರಸರಣ ದರವಾಗಿದೆ ಎಂದು ಐಐಟಿ ಮದ್ರಾಸ್ ನಡೆಸಿರುವ ಪ್ರಾಥಮಿಕ ಅಧ್ಯಯನ ವರದಿ ತಿಳಿಸಿದೆ. ಫೆಬ್ರವರಿ 1-15ರ ನಡುವೆ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ ಎಂದು ಅದು ಎಚ್ಚರಿಕೆ ನೀಡಿದೆ. ಮರು ಉತ್ಪಾದನಾ ಸಂಖ್ಯೆ (R-naught ಅಥವಾ R0) ಸೋಂಕಿತ ವ್ಯಕ್ತಿಯೊಬ್ಬ ಕಾಯಿಲೆಯನ್ನು ಎಷ್ಟು ಜನರಿಗೆ ಹರಡಬಹುದು ಎಂಬ ಸಂಖ್ಯೆಯನ್ನು