ತಿರುವನಂತಪುರ: ಬಿಂದಿ ಹಾಕಿದ್ದಕ್ಕೆ ಬಾಲಕಿಯೊಬ್ಬಳನ್ನು ಮದರಸಾದಿಂದ ಹೊರಗಟ್ಟಿದ ಘಟನೆ ಕೇರಳದಲ್ಲಿ ನಡೆದಿದೆ. ಈ ವಿಚಾರವನ್ನು ಬಾಲಕಿಯ ತಂದೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಹಣೆಗೆ ಗಂಧದ ಬೊಟ್ಟು ತೊಟ್ಟು ಮದರಸಾಕ್ಕೆ ಹೋದ ತಪ್ಪಿಗೆ ಬಾಲಕಿಯನ್ನು ಹೊರ ಹಾಕಲಾಗಿದೆ ಎಂದು ಬಾಲಕಿಯ ತಂದೆ ಉಮ್ಮರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಈ ಪೋಸ್ಟ್ ಈಗ ವೈರಲ್ ಆಗಿದೆ.ಶಾರ್ಟ್ ಫಿಲಂ ಒಂದರಲ್ಲಿ ನಟಿಸುತ್ತಿದ್ದ ಕಾರಣಕ್ಕೆ ಬಾಲಕಿ ಬೊಟ್ಟು ತೊಟ್ಟುಕೊಂಡು ಮದರಸಾಕ್ಕೆ ಹೋಗಿದ್ದಳು.