ಅಯೋಧ್ಯೆ-ಅಯೋಧ್ಯೆಯ ರಾಮ ಜನ್ಮಭೂಮಿಗೆ ಗುಜರಾತ್ನ ವಡೋದರಾದಿಂದ ಬಂದಿದ್ದ ಬೃಹತ್ ಅಗರಬತ್ತಿಗೆ ಟ್ರಸ್ಟ್ನ ಮಹಾಂತ ನೃತ್ಯ ಗೋಪಾಲ್ ದಾಸ ಅಗ್ನಿಸ್ಪರ್ಶ ಮಾಡಿದ್ದಾರೆ. ಈ ಅಗರಬತ್ತಿ ಒಮ್ಮೆ ಹಚ್ಚಿದರೆ ಸುತ್ತಲಿನ 50 ಕಿ.ಮೀ. ವರೆಗೆ ಸುವಾಸನೆ ಬೀರುತ್ತದೆ ಹಾಗೂ ಒಂದುವರೆ ತಿಂಗಳು ಉರಿಯುತ್ತದೆ. ಈ ಅಗರಬತ್ತಿಯ ತಯಾರಿಕೆಯಲ್ಲಿ ಅಂಟು,ಗೋವಿನ ಸಗಣಿ,ಹಸುವಿನ ತುಪ್ಪ,ಗಿಡಮೂಲಿಕೆಗಳನ್ನು ಬಳಸಲಾಗಿದೆ ಅಂತಾ ಮೂಲಗಳು ಹೇಳಿವೆ.