ತಾಯಿ ಮಗುವಿನ ಬಾಂಧವ್ಯ ಅತ್ಯದ್ಭುತವಾದದ್ದು ಎನ್ನುವುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ

ಲಖನೌ, ಬುಧವಾರ, 1 ಮೇ 2019 (06:44 IST)

 
ಲಖನೌ : ತಾಯಿ ಮಗುವಿನ ಸಂಬಂಧ ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾಗಿದ್ದು ಎಂಬುವುದಕ್ಕೆ ಇದೀಗ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಈ ಘಟನೆಯೇ ಒಂದು ಪ್ರತ್ಯೀಕ್ಷ ಸಾಕ್ಷಿ.


ಲಖನೌನ ಕೆಜಿಎಂಯುನ ಕ್ವೀನ್‌ ಮೇರಿ ಆಸ್ಪತ್ರೆಯಲ್ಲಿ ತಾಯಿಯ ಎದೆಯಿಂದ ಎದೆಹಾಲು ಬರದ ಕಾರಣ ಮಗುವಿಗೆ ಎದೆಹಾಲು ಸಿಗದೆ ತುಂಬಾ ಅಪಾಯದಲ್ಲಿತ್ತು. ಆ ವೇಳೆ ವೈದ್ಯರು ಯಾವುದೇ ಚಿಕಿತ್ಸೆ ನೀಡಿದರೂ ತಾಯಿಯ ಎದೆಯಿಂದ ಹಾಲು ಬರಿಸಲು ಸಾಧ್ಯವಾಗಲಿಲ್ಲ .ಆದರೆ ನಂತರ ತಾಯಿಯ ಎದೆಯಿಂದ ಹಾಲು ಬರಲು ವೈದ್ಯರು ಮಾಡಿದ ಸಾಹಸವನ್ನು ಕೇಳಿದ್ರೆ  ನೀವು ಅಚ್ಚರಿಪಡುತ್ತೀರಾ.


 

ಹೌದು. ಬ್ರೆಸ್ಟ್ ಪಂಪಿಂಗ್‌ ಮುಂತಾದ ಪ್ರಯತ್ನಗಳನ್ನು ಮಾಡಿದರೂ ಸಹ ಎದೆಹಾಲು ಬರದಿದ್ದಾಗ, ಅಲ್ಲದೇ ತಾಯಿಯನ್ನು ಮಗುವಿನ ಬಳಿ ಕರೆತರಲು ಆಗದ ಕಾರಣ ಆ ತಾಯಿಗೆ ಕೌನ್ಸೆಲಿಂಗ್ ಮೂಲಕ ಮಗುವಿನ ಫೋಟೋ ತೋರಿಸಿ ಮಗುವಿನ ಪರಿಸ್ಥಿತಿ ವಿವರಿಸಿದಾಗ ತಾಯಿ ಭಾವನಾತ್ಮಕವಾಗಿದ್ದಾರೆ. ಆಗ ಕೆಲವೇ ಹೊತ್ತಿನಲ್ಲಿ ಆಕೆಯ ಎದೆಯಿಂದ ಹಾಲು ಬಂದಿದೆ. ನಂತರ ತಾಯಿ ಮಗುವಿಗೆ ಎದೆಹಾಲುಣಿಸಿ ಅದರ ಜೀವವನ್ನು ಉಳಿಸಿದ್ದಾಳೆ.

 

ಹೆರಿಗೆಯ ಒತ್ತಡದಿಂದ ಹಾಗೂ ಕೆಲ ಕಾರಣಗಳಿಂದಾಗಿ ಹಾರ್ಮೋನ್‌ ಕೊರತೆಯಾಗಿ ತಾಯಿಯ ಎದೆ ಹಾಲನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ಮುಟ್ಟಿಸಿದರೆ ಹಾರ್ಮೋನ್‌ ಸಕ್ರಿಯವಾಗುತ್ತದೆ. ಇದರಿಂದ ಹಾಲು ಉಣಿಸಲು ಸಾಧ್ಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ತಾಯಿ ಮಗುವಿನ ಬಾಂಧವ್ಯ ಎಂತಹದ್ದು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇರೆ ಬೇಕಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೊಸಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪುರುಷರು ಮಾಡಿದ ಉಪಾಯವೇನು ಗೊತ್ತಾ?

ತಿರುವನಂತಪುರಂ : ಹೊಸಬರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ಪತ್ನಿಯರನ್ನೇ ವಿನಿಮಯ ಮಾಡಿಕೊಳ್ಳಲು ...

news

ಬರ್ತ್ ಡೇ ಪಾರ್ಟಿಗೆ ಕರೆದು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕರು

ಬೆಂಗಳೂರು : ಮಹಿಳೆಯೊಬ್ಬಳನ್ನು ಬರ್ತ್ ಡೇ ಪಾರ್ಟಿ ನೆಪದಲ್ಲಿ ಕರೆದು ಮದ್ಯಪಾನ ಮಾಡಿಸಿ ಹಣದ ಆಮಿಷಯೊಡ್ಡಿ ...

news

SSLC ಫಲಿತಾಂಶ; ಯಾವ ಜಿಲ್ಲೆಗೆ ಯಾವ ಸ್ಥಾನ?

ರಾಜ್ಯದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 73.70 ರಷ್ಟು ...

news

ಸರಕಾರಕ್ಕೆ ವೀರಶೈವ ಲಿಂಗಾಯತ ಸಂಘಟನೆ ಎಚ್ಚರಿಕೆ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.