ಅಕ್ರಮ ಸಂಬಂಧ ಒಪ್ಪದ ಮಗನ ಮೇಲೆ ತಾಯಿ ಎಸಗಿದ್ದಾಳೆ ಇಂತಹ ಘೋರ ಕೃತ್ಯ

ನವದೆಹಲಿ, ಮಂಗಳವಾರ, 29 ಜನವರಿ 2019 (08:18 IST)

ನವದೆಹಲಿ : ಒಪ್ಪದ ಮಗನನ್ನು ಲವರ್ ಜೊತೆ ಸೇರಿ ತಾಯಿನೇ ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಹೊಸ ಅಶೋಕ್ ನಗರದಲ್ಲಿ ನಡೆದಿದೆ.

ರವೀಂದರ್ ಪಾಠಕ್ ಮೃತಪಟ್ಟ ಮಗ. ವೃತ್ತಿಯಲ್ಲಿ ಚಾಲಕನಾಗಿರುವ ಈತ ತನ್ನ ತಾಯಿ ಮತ್ತು ಆಕೆಯ ಸ್ನೇಹಿತ ಅಜಿತ್ ಜೊತೆ ಬಾಡಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದನು. ಆದರೆ ಶನಿವಾರ ರಾತ್ರಿ ಆತ ಕೆಲಸ ಮುಗಿಸಿ ಮನೆಗೆ ಬಂದಾಗ ತನ್ನ ತಾಯಿ ಆಕೆಯ ಸ್ನೇಹಿತ ಅಜಿತ್ ಜೊತೆ ಅನೈತಿಕ ಸಂಬಂಧ ಹೊಂದಿರುವುದ್ದನ್ನು ನೋಡಿದ್ದಾನೆ. ಇದರಿಂದ ಮೂವರ ಮಧ್ಯೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ತಾಯಿ ಮತ್ತು ಸ್ನೇಹಿತ ಇಬ್ಬರು ಇಟ್ಟಿಗೆಯಿಂದ ಪಾಠಕ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಪಾಠಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

 

ತಕ್ಷಣ ಆರೋಪಿಗಳು ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಲ್ಲಿಗೆ ಬಂದ ಅಂಬುಲೆನ್ಸ್ ಚಾಲಕ ಪಾಠಕ್ ನನ್ನು ಕಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನದಿಂದ  ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ  ತಾಯಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭೂಗತ ಪಾತಕಿ ದಾವೂದ್ ಹೆಸರಿನಲ್ಲಿ ಹಣಕ್ಕಾಗಿ ಉದ್ಯಮಿಗೆ ವಾಟ್ಸಾಪ್ ನಲ್ಲಿ ಕೊಲೆ ಬೆದರಿಕೆ

ಬೆಂಗಳೂರು : ಮೋಸ್ಟ್ ವಾಟೆಂಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ದುಷ್ಕರ್ಮಿಗಳು ವಾಟ್ಸಾಪ್ ...

news

ಕಾಂಗ್ರೆಸ್ ನವರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸೂಕ್ತ ಎಂದು ಬಸವರಾಜ್ ಹೊರಟ್ಟಿ ಹೇಳಿದ್ಯಾಕೆ?

ಹುಬ್ಬಳ್ಳಿ : ಕಾಂಗ್ರೆಸ್ ನ ಕೆಲವು ಸಚಿವರು ಸಿದ್ಧರಾಮಯ್ಯ ಅವರನ್ನು ನಮ್ಮ ಮುಖ್ಯಮಂತ್ರಿ ಎಂದು ಹೇಳಿಕೆ ...

news

ಕಲಬುರಗಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಶ್ರೀರಾಮುಲು

ಇಡೀ ಕಲಬುರಗಿಯಲ್ಲಿ ಬಿಜೆಪಿ ತಂಡಗಳು ಬರ ಅಧ್ಯಯನ ನಡೆಸುತ್ತಿವೆ. ಸೇಡಂ, ಚಿತ್ತಾಪುರ ತಾಲೂಕಿನಲ್ಲಿ ಇಂದು ಬರ ...

news

14ನೇ ಹಣಕಾಸು ಅನುದಾನ ಲಪಟಾಯಿಸಿದ ಗ್ರಾಮ ಪಂಚಾಯತ ಪಿಡಿಒ

14ನೇ ಹಣಕಾಸು ಅನುದಾನ ದಲ್ಲಿ ಬಾರಿ ಗೋಲ ಮಾಲ್ ನಡೆದಿರುವುದು ಬಯಲಾಗಿದೆ.