Widgets Magazine

ಮಗಳ ಮುಂದೆಯೇ ತಾಯಿಯ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ

ನವದೆಹಲಿ| pavithra| Last Modified ಶನಿವಾರ, 9 ಫೆಬ್ರವರಿ 2019 (09:35 IST)
ನವದೆಹಲಿ : ಎರಡನೇ ಮದುವೆಯಾಗಲು ಒಪ್ಪದ ವಿವಾಹಿತ ಮಹಿಳೆಯೊಬ್ಬಳನ್ನು ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ದೆಹಲಿಯ ನಂಗ್ಲೋಲಿಯಲ್ಲಿ ನಡೆದಿದೆ.


ಮಾಧುರಿ (45)ಮೃತ ದುರ್ದೈವಿ. ಶ್ಯಾಮ್ ಯಾದವ್ ಕೊಲೆ ಮಾಢಿದ ಆರೋಪಿ. ಮಾಧುರಿ ಹಾಗೂ ಶ್ಯಾಮ್ ಯಾದವ್ ಇಬ್ಬರು ಶೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಶ್ಯಾಮ್ ಮಾಧುರಿಯನ್ನು ಪ್ರೀತಿಸುತ್ತಿದ್ದನು. ಆದರೆ ಈಗಾಗಲೇ ಮದುವೆಯಾಗಿ ಒಂದು ಹೆಣ್ಣು ಮಗುವಿನ ತಾಯಿಯಾಗಿರುವ ಮಾಧುರಿ ಮದುವೆಗೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಶ್ಯಾಮ್ ಮಗಳ ಮುಂದೆ ಆಕೆಯನ್ನು ಚಾಕುವಿನಿಂದ ಇರಿದಿದ್ದಾನೆ.


ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲಿಯೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮಗಳ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :