Widgets Magazine

ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಾದ ಶಿಕ್ಷಕರಿಂದಲೇ ನಡೆದಿದೆ ಇಂತಹ ನೀಚ ಕೃತ್ಯ

ರಾಯಗಢ| pavithra| Last Updated: ಬುಧವಾರ, 23 ಜನವರಿ 2019 (09:07 IST)
: ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಾದ ಶಿಕ್ಷಕರೇ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ಕಾಮುಕನಿಗೆ ಒಪ್ಪಿಸಿ ಆಕೆಯ ಮೇಲೆ ಮಾಡಿಸಿದ ಘಟನೆ ಮಧ್ಯಪ್ರದೇಶದ ರಾಯಗಢ ಜಿಲ್ಲೆಯ ಗ್ರಾಮವೊಂದರ ಖಾಸಗಿ ಶಾಲೆಯಲ್ಲಿ ನಡೆದಿದೆ.

ಅಜೀಂ ಖಾನ್‌ (21) ಅತ್ಯಾಚಾರ ಮಾಡಿದ ಆರೋಪಿಯಾಗಿದ್ದು, ರಿತಿಕ್‌ ಕುಶ್ವಾಹಾ (21) ಮತ್ತು ಶ್ಯಾಮ್‌ ಪ್ರಜಾಪತಿ (22)

ಅತ್ಯಾಚಾರಿಗೆ ನೆರವಾದ ಶಿಕ್ಷಕರು. ಸಂತ್ರಸ್ತ ಬಾಲಕಿ 9ನೇ ತರಗತಿ ಓದುತ್ತಿದ್ದು,
ಶಾಲೆ ಮುಗಿದ ಬಳಿಕ ಸಂದವಾತಾ ಗ್ರಾಮದ ಬಸ್‌ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆರೋಪಿ ಅತ್ಯಾಚಾರಿ ಖಾನ್‌ ಆಕೆಗೆ ಆಮಿಷ ಒಡ್ಡಿ ಶಾಲೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಆಗ ಈ ಇಬ್ಬರು ಶಿಕ್ಷಕರು ದಲಿತ ಬಾಲಕಿ ಮತ್ತು ಖಾನ್‌ ನನ್ನು ಶಾಲಾ ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಜಡಿದು ಅತ್ಯಾಚಾರಿಗೆ ನೆರವಾಗಿದ್ದರು.


ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯ ಹೆತ್ತವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ
ದೂರಿನ್ವಯ ಅತ್ಯಾಚಾರಗೈದಿರುವ ಆರೋಪಿ ಅಜೀಂ ಖಾನ್‌ ಜೊತೆಗೆ ಈತನಿಗೆ ನೆರವಾದ ಇಬ್ಬರು ಶಾಲಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್
ಡೌನ್
ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :