ಲಕ್ನೋ: ಉತ್ತರಪ್ರದೇಶದ ಚೌಢಿಪುರ ಎಂಬ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯೇ ಇರಲ್ಲ. ಅದಕ್ಕಿರುವ ಕಾರಣ ಇಂಟ್ರೆಸ್ಟಿಂಗ್ ಆಗಿದೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಹಾಗಿದ್ದರೂ ತಮ್ಮ ಗ್ರಾಮ ಅಭಿವೃದ್ಧಿ ಕಂಡಿಲ್ಲ. ಕುಗ್ರಾಮವಾಗಿಯೇ ಇದೆ ಎಂಬುದು ಗ್ರಾಮಸ್ಥರ ಕೋಪಕ್ಕೆ ಕಾರಣ.ಈ ಗ್ರಾಮಕ್ಕೆ ಇನ್ನೂ ವಿದ್ಯುತ್, ಸೂಕ್ತ ರಸ್ತೆ, ಶೌಚಾಲಯ ವ್ಯವಸ್ಥೆ ಯಾವುದೂ ಸಿಕ್ಕಿಲ್ಲ. ಇಲ್ಲಿರುವ ಹೆಚ್ಚಿನ ಮಂದಿ ಬಡತನದಿಂದ ಬಳಲುತ್ತಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.