ದೇಶದ ಪ್ರಸಿದ್ದ ಗುರುವಾಯೂರು ದೇವಾಲಯವನ್ನು ಸ್ಫೋಟಿಸುವುದಾಗಿ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ದೇವಾಲಯದಾದ್ಯಂತ ಭಾರಿ ತಪಾಸಣೆ ಕಾರ್ಯಗೊಂಡಿದ್ದಾರೆ. ದೇವಾಲಯದಲ್ಲಿ ಅವ್ಯವಹಾರ ನಡೆಯುತ್ತಿರುವುದರಿಂದ ಸ್ಫೋಟಿಸುತ್ತೇವೆ ಎನ್ನುವ ಬೆದರಿಕೆ ಬಂದಿರುವ ಹಿನ್ನೆಯಲ್ಲಿ ದೇವಸ್ಥಾನದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪರಿಚಿತ ವ್ಯಕ್ತಿಯೊಬ್ಬ ದೇವಾಲಯದ ಟ್ರಸ್ಟ್ ಸದಸ್ಯರು ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ದೇವಾಲಯವನ್ನು ಧ್ವಂಸಗೊಳಿಸುತ್ತೇನೆ ಎಂದು ದೇವಸ್ಥಾನದ ಸಿಬ್ಬಂದಿಗೆ ಕರೆ ಮಾಡಿದ್ದಾನೆ. ಕರೆ