ಹೈದರಾಬಾದ್: ನೀರಿನಲ್ಲಿ ಆಡಲು ಹೋಗಿದ್ದ ಮೂವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿದ್ದ ದುರಂತ ಘಟನೆ ತೆಲಂಗಾಣದಲ್ಲಿ ನಡೆದಿದೆ.ಏಳನೇ ತರಗತಿ ಓದುತ್ತಿದ್ದ ಆರು ಹುಡುಗರ ಗುಂಪು ಸಮೀಪದ ಕೆರೆಯೊಂದರಲ್ಲಿ ಈಜಲು ಹೋಗಿದ್ದರು. ಈ ಪೈಕಿ ಇಬ್ಬರು ನೀರಿಗಿಳಿದಿದ್ದರು. ಆದರೆ ಕೆರೆಯ ಆಳಗಲ ಅರಿಯದೇ ಗಾಬರಿಗೊಂಡಿದ್ದಾರೆ.ಈ ವೇಳೆ ದಡದಲ್ಲಿದ್ದ ಇನ್ನೊಬ್ಬ ಬಾಲಕ ಸಹಾಯ ಮಾಡಲೆಂದು ನೀರಿಗೆ ಜಿಗಿದಿದ್ದಾನೆ. ಈ ವೇಳೆ ದುರಂತ ಸಂಭವಿಸಿದೆ. ಇದೀಗ ಮೃತದೇಹಗಳನ್ನು ಪೋಷಕರಿಗೆ ಒಪ್ಪಿಸಲಾಗಿದೆ.