ನವದೆಹಲಿ: ತ್ರಿವಳಿ ತಲಾಖ್ ವಿಚಾರಣೆ ನಡೆಸಿದ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಬಹುಮತದ ತೀರ್ಪು ಪ್ರಕಟವಾಗಿದ್ದು, ತ್ರಿವಳಿ ತಲಾಖ್ ರದ್ದುಗೊಳಿಸಲಾಗಿದೆ. ಈ ಮೊದಲು ನ್ಯಾ. ಖೆಹರ್ ತಮ್ಮ ತೀರ್ಪು ಓದಿದ್ದರು. ಇದರಲ್ಲಿ ತ್ರಿವಳಿ ತಲಾಖ್ ನ್ನು ಮಾನ್ಯ ಮಾಡಿದ್ದರು. ಆದರೆ ಕಾನೂನಿನ ವ್ಯಾಪ್ತಿಗೆ ತರಬೇಕು ಎಂದಿದ್ದರು.ಇದೀಗ ಐವರು ನ್ಯಾಯಾಧೀಶರು ಪ್ರತ್ಯೇಕವಾಗಿ ತಮ್ಮ ತೀರ್ಪು ನೀಡಿದ್ದು, ಮೂವರು ನ್ಯಾಯಾಧೀಶರು ತ್ರಿವಳಿ ತಲಾಖ್ ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದಾರೆ. ಹೀಗಾಗಿ ಬಹುಮತದ ಆಧಾರದಲ್ಲಿ