ಬೇಸಿಲ ಬೇಗೆಯಿಂದ ಹೈರಾಣಾಗಿದ್ದ ರಾಜ್ಯದ ಕೆಲ ಭಾಗಗಳಲ್ಲಿ ಶುಕ್ರವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟು 5 ಜನರು ದುರ್ಮರವನ್ನಪ್ಪಿದ್ದಾರೆ. ಅಥಣಿ ತಾಲೂಕು ಸವಧಿ ಗ್ರಾಮದಲ್ಲಿ ಶುಕ್ರವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಯಲ್ಲಿ ಸಿಡಿಲು ಬಡಿದು ಆದೇಶ ಅಲಗೂರೆ(45), ಪತ್ನಿ ಅನಂತಮತಿ ಅಲಗೂರೆ (38) ಹಾಗೂ ಮಗ ದರ್ಶನ ಅಲಗೂರೆ (16) ಮೃತಪಟ್ಟವರಾಗಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದವರಾಗಿದ್ದಾರೆ. ದಂಪತಿ ಮಗನ