ನವದೆಹಲಿ : ಸತತ 3 ವರ್ಷಗಳ ನಂತರ ಟಿಬೆಟ್ ಧರ್ಮಗುರು ದಲೈಲಾಮಾ ಅವರು ದೆಹಲಿ ಭೇಟಿ ನೀಡಲಿದ್ದಾರೆ.ಲಡಾಖ್ನಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯದ ನಂತರ ದಲೈಲಾಮಾ ಅವರು ಶುಕ್ರವಾರ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಲಡಾಖ್ ಬೌದ್ಧ ಸಂಘ ತಿಳಿಸಿದೆ. ರಾಜಕೀಯ ನಾಯಕರೊಂದಿಗೆ ದಲೈಲಾಮಾ ಅವರು ಸಭೆ ನಡೆಸುವ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಒಂದು ತಿಂಗಳು ವಾಸ್ತವ್ಯ ಹೂಡಿದ್ದ ಲಡಾಖ್ನಿಂದ ಆ.26ರಂದು ನಿರ್ಗಮಿಸಲಿದ್ದಾರೆ. ಲೇಹ್ನಿಂದ ವಿಮಾನದ ಮೂಲಕ ದೆಹಲಿಗೆ ಆಗಮಿಸಲಿದ್ದಾರೆ