ನವದೆಹಲಿ: 2012 ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಸಿದ್ಧತೆ ಆರಂಭವಾಗಿದೆ. ಆದರೆ ಗಲ್ಲಿಗೇರಿಸಲು ಹ್ಯಾಂಗ್ ಮ್ಯಾನ್ ಗಳಿಲ್ಲದೇ ತಿಹಾರ್ ಜೈಲು ಅಧಿಕಾರಿಗಳು ಪರದಾಡುತ್ತಿದ್ದಾರೆ.ಕೇಂದ್ರ ಗೃಹ ಸಚಿವಾಲಯ ಈ ಅಪರಾಧಿಗಳಿಗೆ ಕ್ಷಮಾದಾನ ನೀಡದಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ. ಈ ಹಿನ್ನಲೆಯಲ್ಲಿ ಅಪರಾಧಿಗಳಿಗೆ ತಿಂಗಳೊಳಗಾಗಿ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆಯಿದೆ. ಆದರೆ ಶಿಕ್ಷೆ ಜಾರಿಗೊಳಿಸಲು ಸದ್ಯಕ್ಕೆ ತಿಹಾರ್ ಜೈಲ್ ನಲ್ಲಿ ಹ್ಯಾಂಗ್ ಮ್ಯಾನ್ ಗಳಿಲ್ಲ.ಹೀಗಾಗಿ ದೇಶದ ಬೇರೆ ಜೈಲುಗಳಲ್ಲಿ