ಗುಜರಾತ್ : ಗೂಬೆಯೊಂದಿಗೆ ಟಿಕ್ ಟಾಕ್ ಮಾಡಿದ ಕಾರಣ ಯುವತಿಯೊಬ್ಬಳಿಗೆ 25 ಸಾವಿರ ದಂಡ ವಿಧಿಸಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಕೀರ್ತಿ ಪಟೇಲ್ ಎಂಬ ಯುವತಿ ಇತ್ತೀಚೆಗೆ ಅಳಿವಿನಂಚಿನಲ್ಲಿರುವ ಗೂಬೆಯೊಂದನ್ನು ಹಿಡಿದು ಟಿಕ್ ಟಾಕ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ಬಗ್ಗೆ ಪ್ರಾಣಿ ಪ್ರಿಯರು ವನ್ಯ ಜೀವಿ ಹಾಗೂ ಪ್ರಕೃತಿ ಕಲ್ಯಾಣ ಟ್ರಸ್ಟ್ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.