ನವದೆಹಲಿ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪಂಚಾಯತ್ ಚುನಾವಣೆಯ ಸಮಯದಲ್ಲಿ ರಕ್ತದೊಂದಿಗೆ ಆಟವಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷತ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ಪಕ್ಷವು ಮತದಾರರಿಗೆ ಬೆದರಿಕೆ ಹಾಕುತ್ತಿದೆ ಮತ್ತು ಅವರ ಜೀವನವನ್ನು ನರಕವಾಗಿಸಿದೆ. ಪ್ರಜಾಪ್ರಭುತ್ವದ ಚಾಂಪಿಯನ್ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವವರು ಇವಿಎಂ ತೊಡೆದುಹಾಕಲು ಪಿತೂರಿ ನಡೆಸುವವರು ಎಂದು