ನವದೆಹಲಿ : ಗುರುಗ್ರಾಮದಲ್ಲಿ ಶಾಲಾ ಮಕ್ಕಳ ವಾಹನದ ಮೇಲೆ ಪದ್ಮಾವತ್ ಚಿತ್ರ ಪ್ರತಿಭಟನಾಕಾರರು ದಾಳಿ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ. ದಿಲ್ಲಿಯ ಉತ್ತರ ಛತ್ರಶಾಲಾ ಸ್ಟೇಡಿಯಂ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ. ನಾವಿನ್ನು ಮೂಕರಾಗಿರಲು ಸಾಧ್ಯವಿಲ್ಲ. ಈ ದಾಳಿಕೋರರು ಮುಸ್ಲಿಂರನ್ನು ಕೊಂದವರು. ದಲಿತರನ್ನು ಸಜೀವ