Widgets Magazine

ತೆಲಂಗಾಣದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಹೈದರಾಬಾದ್| Jaya| Last Modified ಸೋಮವಾರ, 28 ಏಪ್ರಿಲ್ 2014 (11:36 IST)
ಅಖಂಡ ಆಂಧ್ರ ವಿಭಜನೆಯಾಗಿ ರಚಿತವಾಗಿರುವ ತೆಲಂಗಾಣದಲ್ಲಿ ನಡೆಯುತ್ತಿರುವ ಲೋಕಸಭಾ ಮತ್ತು ವಿಧಾನಸಭೆಗಳ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 4 ಗಂಟೆಗೆ ತೆರೆ ಬೀಳಲಿದೆ. ಹಾಗಾಗಿ ವೈಎಸ್‌ಆರ್, ಕಾಂಗ್ರೆಸ್ ಮತ್ತು ತೆಲುಗು ದೇಶ್ಂ ಪಕ್ಷಗಳು ಗೆಲುವಿಗಾಗಿ ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಇಲ್ಲಿ ಎಪ್ರೀಲ್ 30 ಕ್ಕೆ ಮತದಾನ ನಿಗದಿಯಾಗಿದ್ದು, 17 ಲೋಕಸಭಾ ಮತ್ತು 119 ವಿಧಾನಸಭಾ ಸ್ಥಾನಗಳಿಗೆ ಒಂದೇ ದಿನ, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

30,518 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 20ಸಾವಿರ ಬೂತ್‌ಗಳಲ್ಲಿ ಲೈವ್ ರಿಕಾರ್ಡಿಂಗ್ ಮತ್ತು ಉಳಿದೆಡೆ ವಿಡಿಯೋ ಚಿತ್ರೀಕರಣವನ್ನು ಮಾಡಲಾಗುವುದು
ಎಂದು ಮುಖ್ಯ ಚುನಾವಣಾಧಿಕಾರಿ ಭನ್ವರ್‌ಲಾಲ್ ತಿಳಿಸಿದ್ದಾರೆ.

17 ಸಂಸದೀಯ ಸ್ಥಾನಗಳಿಗೆ 265 ಅಭ್ಯರ್ಥಿಗಳು ಮತ್ತು 119 ವಿಧಾನಸಭಾ ಸ್ಥಾನಗಳಿಗೆ 1669 ಅಭ್ಯರ್ಥಿಗಳು ತಮ್ಮ ಹಣೆಬರಹವನ್ನು ಒರೆಗೆ ಹಚ್ಚಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :