ರಾಂಚಿ : ಬಹುಕೋಟಿ ಮೇವು ಹಗರಣದಲ್ಲಿ ದೋಷಿ ಎಂದು ಪರಿಗಣಿತರಾಗಿರುವ ಲಾಲು ಪ್ರಸಾದ್ ಯಾದವ್ ಮತ್ತು ಇತರ ದೋಷಿಗಳಿಗೆ ನಾಳೆ ಗುರುವಾರ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಬಹು ಕೋಟಿ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಿತ್ತು. ಹಾಗಾಗಿ ಲಾಲು ಪ್ರಸಾದ್ ಅವರನ್ನು ಇಂದು ರಾಂಚಿಯಲ್ಲಿನ ಬಿರ್ಸಾ ಮುಂಡಾ ಜೈಲಿನಿಂದ ಕೋರ್ಟಿಗೆ ಬಿಗಿ ಭದ್ರತೆಯಲ್ಲಿ ತರಲಾಗಿತ್ತು.