ಅಮರನಾಥ ಯಾತ್ರಿಗಳ ಮೇಲಿನ ದಾಳಿಯ ಮಾಸ್ಟರ್ ಮೈಂಡ್, ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ ಲಷ್ಕರ್ ಇ ತಯಿಬಾ ಉಗ್ರ ಅಬು ಇಸ್ಮಾಯಿಲ್`ನನ್ನ ಭದ್ರತಾ ಪಡೆ ಯೋಧರು ಗುರುವಾರ ಹೊಡೆದುರುಳಿಸಿದ್ದಾರೆ. ಶ್ರೀನಗರದ ಹೊರವಲಯದ ನೌಗಮ್`ನ ಅರಿಬಾಗ್ ಪ್ರದೇಶದಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಉಗ್ರ ಅಬು ಇಸ್ಮಾಯಿಲ್ ಹತ್ಯೆ ಮಾಡಲಾಗಿದ್ದು, ಪೊಲೀಸ್ ಮತ್ತು ಭದ್ರತಾ ಪಡೆ ಯೋಧರ ಬಹುದೊಡ್ಡ .ಬೇಟೆ ಇದಾಗಿದೆ. ಈತ ಇತ್ತೀಚೆಗೆ ಅಮರನಾಥ ಯಾತ್ರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿಯಾಗಿದ್ದಾನೆ. ಅಮರನಾಥ