ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿಯು ಇನ್ನೋವಾ ಹೈಕ್ರಾಸ್ ಕಾರಿನ ZX ಮತ್ತು ZX(O) ಅವತರಣಿಕೆಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೂರೈಕೆ ಸವಾಲುಗಳ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೈಕ್ರಾಸ್ನ ಇತರ ಅವತರಣಿಕೆಗಳ ಬುಕ್ಕಿಂಗ್ ಮುಂದುವರಿಯಲಿದೆ. ಟೊಯೋಟಾ ಇನ್ನೋವಾ ಹೈಕ್ರಾಸ್ VX, VX(O), ZX ಮತ್ತು ZX(O) ಅವತರಣಿಕೆಗಳು ಹೈಬ್ರಿಡ್ ಎಂಜಿನ್ ಹೊಂದಿದ್ದು ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ