ಹೈದರಾಬಾದ್: ತೆಲಂಗಾಣದ ನಾಂಪಲ್ಲಿಯಲ್ಲಿ ಚಾರ್ ಮಿನಾರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಪರಿಣಾಮ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.ನಾಂಪಲ್ಲಿ ರೈಲು ನಿಲ್ದಾಣದ ಬಳಿ ದುರಂತ ಸಂಭವಿಸಿದೆ. ಮೂರು ಭೋಗಿಗಳು ಹಳಿ ತಪ್ಪಿ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ 50 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.ಗಾಯಾಳುಗಳನ್ನು ಲಾಲಾಗುಡಾ ರೈಲ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈನಿಂದ ಹೈದರಾಬಾದ್ ಗೆ ಬರುತ್ತಿದ್ದ ಚಾರ್ ಮಿನಾರ್ ಎಕ್ಸ್ ಪ್ರೆಸ್ ನಾಂಪಲ್ಲಿ ನಿಲ್ದಾಣದ ಬಳಿ ಹಳಿ ತಪ್ಪಿದೆ.