ಫೋನ್ ನಲ್ಲಿ ತಲಾಖ್: ಪತಿ ವಿರುದ್ಧ ಕೇಸ್ ಹಾಕಿದ ಮುಸ್ಲಿಂ ಮಹಿಳೆ

ಮುಂಬೈ| Krishnaveni K| Last Modified ಸೋಮವಾರ, 23 ನವೆಂಬರ್ 2020 (10:56 IST)
ಮುಂಬೈ: ಫೋನ್ ನಲ್ಲಿ ತ್ರಿವಳಿ ತಲಾಖ್ ನೀಡಿದ್ದಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

 
32 ವರ್ಷದ ಪತಿ ಕೆಲವು ಸಮಯದ ಮೊದಲು ಉದ್ಯೋಗಕ್ಕಾಗಿ ದುಬೈಗೆ ಹೋಗಿ ನೆಲೆಸಿದ್ದ. ಎರಡು ದಿನದ ಮೊದಲು ಪತ್ನಿಗೆ ಕರೆ ಮಾಡಿ ನಿನ್ನ ಜತೆಗೆ ಸಂಬಂಧ ಮುಂದುವರಿಸಲು ಇಷ್ಟವಿಲ್ಲ ಎಂದು ಫೋನ್ ಮೂಲಕವೇ ತಲಾಖ್ ನೀಡಿದ್ದ. ಈ ಬಗ್ಗೆ ಇದೀಗ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದರಲ್ಲಿ ಇನ್ನಷ್ಟು ಓದಿ :