ಲಕ್ನೋ : ನಾಯಿಗೆ ಹೊಡೆದ ಎಂಬ ಕ್ಷುಲಕ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನ ಮೇಲೆ ಗುಂಡು ಹಾರಿಸಿ ಜೀವವನ್ನೇ ತೆಗೆಯಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಚಿನ್ ಕಶ್ಯಪ್ (17) ಗುಂಡಿನ ದಾಳಿಗೆ ಒಳಗಾದ ವಿದ್ಯಾರ್ಥಿಯಾಗಿದ್ದು, ಗುಂಡೇಟು ತಿಂದು ಸಾವುಬದುಕಿನ ಮಧ್ಯ ಹೋರಾಟ ಮಾಡುತ್ತಿರುವ ಈತನನ್ನು ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಸಚಿನ್ ಶನಿವಾರದಂದು ಕಾಲೇಜಿನಿಂದ ಮನೆಗೆ ಬೈಕಿನಲ್ಲಿ ಬರುವಾಗ ನಾಯಿಯೊಂದು ಆತನನ್ನು ಹಿಂಬಾಲಿಸಿ