ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದ ಟಿಟಿವಿ ದಿನಕರನ್ಗೆ ಅವಕಾಶ ನಿರಾಕರಿಸಲಾಗಿದೆ. ಶಶಿಕಲಾ ಭೇಟಿಗೆ ಜೈಲು ಅಧಿಕಾರಿಗಳು ಅವಕಾಶ ನೀಡದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಪರಪ್ಪನ ಅಗ್ರಹಾರ ಜೈಲಿನಿಂದ ಹಿಂದುರಿಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಶಿಕಲಾ ಎರಡು ಕೋಟಿ ರೂಪಾಯಿ ಲಂಚ ನೀಡಿ ವಿಐಪಿ ಆತಿಥ್ಯ ಪಡೆದಿದ್ದಾರೆ ಎಂದು ಕಾರಾಗೃಹ ಡಿಐಜಿಯಾಗಿದ್ದ ರೂಪಾ ಮೌಡ್ಗಿಲ್ ಸರಕಾರಕ್ಕೆ ವರದಿ ನೀಡಿದ