ಹೈದರಾಬಾದ್: ಮೂಢನಂಬಿಕೆ ಎನ್ನುವುದು ಕಳ್ಳರನ್ನೂ ಬಿಟ್ಟಿಲ್ಲ ನೋಡಿ! ಆದರೆ ಅದೇ ಕಾರಣಕ್ಕೆ ಇಬ್ಬರು ಖದೀಮರು ಇದೀಗ ಪೊಲೀಸರ ಕೈಲಿ ಸಿಕ್ಕಿಹಾಕಿಕೊಂಡಿದ್ದಾರೆ.ಮಂಗಳವಾರ ಹಗಲು ಹೊತ್ತಿನಲ್ಲೇ ಕಳ್ಳತನ ಮಾಡುತ್ತಿದ್ದ ಸಮೀರ್ ಖಾನ್ ಮತ್ತು ಮೊಹಮ್ಮದ್ ಶೊಯೇಬ್ ಎಂಬ ಇಬ್ಬರು ಕಳ್ಳರು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ಕಡೆ ದರೋಡೆ ನಡೆಸಿ ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದರು. ಇಬ್ಬರಿಗೂ ದೃಷ್ಟಿ ದೋಷವಿದ್ದರಿಂದ ಹಗಲು ಹೊತ್ತಿನಲ್ಲೇ ಕಳ್ಳತನ ಮಾಡುತ್ತಿದ್ದರು. ಇನ್ನು ಮಂಗಳವಾರ ಇವರಿಗೆ ಶುಭದಿನವಂತೆ!