ನವದೆಹಲಿ: ಮೊದಲನೇ ಹಂತದ ಲಾಕ್ ಡೌನ್ ಮುಕ್ತಾಯವಾದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು 10 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದರೆ ಟ್ವಿಟರಿಗರೊಬ್ಬರು ಪ್ರಧಾನಿ ಮೋದಿಗೆ 10 ಗಂಟೆಗೆ ಭಾಷಣ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ!ಇದಕ್ಕೆ ಕಾರಣವೇನು ಗೊತ್ತಾ? ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಪೌರಾಣಿಕ ಧಾರವಾಹಿ ರಾಮಾಯಣ! ಬೆಳಿಗ್ಗೆ 9 ಗಂಟೆಯಿಂದ ಪ್ರಸಾರವಾಗುವ ಈ ಧಾರವಾಹಿ 10.15 ರವರೆಗೂ ಮುಂದುವರಿಯುತ್ತದೆ. ಹೀಗಾಗಿ ಟ್ವಿಟರಿಗರೊಬ್ಬರು 10.30 ಕ್ಕೆ ಭಾಷಣ ಮಾಡಿ