Widgets Magazine

ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಗೆ ಭಾರತ ರತ್ನ ನೀಡಲು ಒತ್ತಾಯ

pv narasimha rao
ನವದೆಹಲಿ| Krishnaveni K| Last Modified ಭಾನುವಾರ, 28 ಜೂನ್ 2020 (09:57 IST)
ನವದೆಹಲಿ: ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಗೆ ನೀಡುವಂತೆ ಟ್ವಿಟರಿಗರು ಒತ್ತಾಯಿಸಿದ್ದು ಟ್ರೆಂಡ್ ಸೃಷ್ಟಿಸಿದ್ದಾರೆ.
 

ಇಂದು ಮಾಜಿ ಪ್ರಧಾನಿ ನರಸಿಂಹ ರಾವ್ ಅವರ 99 ನೇ ಜನ್ಮದಿನ. ಈ ಹಿನ್ನಲೆಯಲ್ಲಿ ದಿವಂಗತ ಪ್ರಧಾನಿಯನ್ನು ಸ್ಮರಿಸಿಕೊಂಡಿರುವ ಟ್ವಿಟರಿಗರು ಈ ಒತ್ತಾಯ ಮಾಡಿದ್ದಾರೆ. ಅವರು ಭಾರತದ ಅರ್ಥ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದ ಕ್ರಾಂತಿಕಾರ. ಅವರ ಸಾಧನೆಯನ್ನು ಗುರುತಿಸಿ ಇನ್ನಾದರೂ ಅವರಿಗೆ ಭಾರತ ರತ್ನ ಗೌರವ ನೀಡಬೇಕೆಂದು ಟ್ವಿಟರಿಗರು ಒತ್ತಾಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :