ನವದೆಹಲಿ: ಕರ್ತಾಪುರ್ ಕಾರಿಡಾರ್ ಉದ್ಘಾಟನೆಗೆ ಭಾರತದ ಹಾಲಿ ಪ್ರಧಾನಿ ಮೋದಿಯನ್ನು ಬಿಟ್ಟು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಪಾಕಿಸ್ತಾನ ಸರ್ಕಾರ ಆಹ್ವಾನ ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.ಪಾಕಿಸ್ತಾನದ ಈ ಆಹ್ವಾನ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಗೆ ಇರಿಸು ಮುರಿಸು ಸೃಷ್ಟಿಸಿದೆ. ಪಾಕ್ ಆಹ್ವಾನವನ್ನು ಒಪ್ಪಿದರೆ ಬಿಜೆಪಿ ಸೇರಿದಂತೆ ಹಲವರ ಟೀಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಮನಮೋಹನ್ ಸಿಂಗ್ ಈ ಆಹ್ವಾನವನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚಿದೆ. ಅತ್ತ ಪಾಕಿಸ್ತಾನದ