ನವದೆಹಲಿ: ಮದ್ಯದ ನಶೆಯಲ್ಲಿ ಮನುಷ್ಯ ತಾನೇನು ಮಾಡುತ್ತೇನೆಂಬುದನ್ನು ಮರೆಯುತ್ತಾನೆ. ಇದೀಗ ವ್ಯಕ್ತಿಗಳಿಬ್ಬರು ಮದ್ಯದ ನಶೆಯಲ್ಲಿ ಕಿತ್ತಾಡಿಕೊಂಡಿದ್ದು ಓರ್ವನನ್ನು ಕೊಲೆ ಮಾಡಲಾಗಿದೆ.ಆರೋಪಿ ಸಣ್ಣದೊಂದು ಬೇಕರಿ ನಡೆಸುತ್ತಿದ್ದ. ಮೃತ ವ್ಯಕ್ತಿ ಈತನ ಅಂಗಡಿಗೆ ಮಾಮೂಲಾಗಿ ಬರುತ್ತಿದ್ದ ಗ್ರಾಹಕನಾಗಿದ್ದ. ಇದೇ ಸ್ನೇಹದಲ್ಲಿ ಇಬ್ಬರೂ ನಾಲ್ಕು ಬಾಟಲಿ ಮದ್ಯ ಖರೀದಿಸಿ ಜೊತೆಗೇ ಕೂತು ಕುಡಿದಿದ್ದಾರೆ.ಮೂರು ಬಾಟಲಿ ಮದ್ಯ ಖಾಲಿಯಾದ ಬಳಿಕ ವರಾತ ಶುರುವಾಗಿದೆ. ಮೃತ ವ್ಯಕ್ತಿ ಆರೋಪಿಯ ಫೋನ್ ಪಡೆದು ಯಾರಿಗೋ ಮಾತನಾಡಲು ಶುರು ಹಚ್ಚಿಕೊಂಡಿದ್ದಾನೆ.